ನಟ ದರ್ಶನ್ ಇನ್ಮುಂದೆ 'ಕರುನಾಡ ಅಧಿಪತಿ ' ಇದು ದುಬೈ ಕನ್ನಡಿಗರು ನೀಡಿದ ಬಿರುದು
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿದೆ ಅಭಿಮಾನಿಗಳು ಹಲವು ವರ್ಷಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ಎಂದು ಬಿರುದು ನೀಡಿದ್ದಾರೆ. ಅದೆಲ್ಲ ಏಕೆ ಅಭಿಮಾನಿಗಳೇ ಅವರನ್ನು ಡಿ ಬಾಸ್ ಎಂದು ಪ್ರೀತಿಯಿಂದ ಕರೆಯುತ್ತಾರೆ. ದುಬೈ ನಲ್ಲಿ ನಡೆದ ಸಮಾರಂಭದಲ್ಲಿ ಹೊಸ ಬಿರುದು ನೀಡಲಾಗಿದೆ. ಆ ಬಿರುದು ಏನೆಂದರೆ 'ಕರುನಾಡ ಅಧಿಪತಿ ' ಎಂದು ಬಿರುದು ನೀಡಿದ್ದಾರೆ. ಜೊತೆಗೆ ನಿರ್ದೇಶನ ಮಾಡಿರುವ 'ತರುಣ್ ಸುಧೀರ್ ' ಅವರಿಗೆ ' ಹ್ಯಾಟ್ರಿಕ್ ಡೈರೆಕ್ಟರ್ ' ಎಂಬ ಬಿರುದನ್ನು ಕೂಡ ದುಬೈ ಕನ್ನಡಿಗರು ನೀಡಿದ್ದಾರೆ.
Kaatera Success: ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಫಸಲು ತೆಗೆದ ಕಾಟೇರ ಸಿನಿಮಾ, ನೂರು ಕೋಟಿಗೂ ಅಧಿಕ ಕಮಾಯಿ ಮಾಡಿದೆ. ಕರ್ನಾಟಕದಲ್ಲಷ್ಟೇ ಅಲ್ಲದೆ, ವಿದೇಶಿ ನೆಲದಲ್ಲೂ ಕಹಳೆ ಮೊಳಗಿಸುತ್ತಿದೆ. ದೂರದ ದುಬೈನಲ್ಲೂ ಅಲ್ಲಿನ ಕನ್ನಡಿಗರ ಗಮನ ಸೆಳೆದಿದೆ ಕಾಟೇರ ಸಿನಿಮಾ. ತಾವೂ ಸಹ ತಮ್ಮ ತಂಡದ ಜತೆಗೆ ದುಬೈಗೆ ತೆರಳಿ, ಸಿನಿಮಾ ಪ್ರಮೋಷನ್ ಮಾಡಿದ್ದಾರೆ.